ಕೊಪ್ಪಳ : ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದು, ಇದರಿಂದ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೀಡಾಗಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಗುರುವಾರ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸಿ, ಅಗತ್ಯ ವಸ್ತುಗಳ ಮೇಲಿನ ತೆರಿಗೆ ಮತ್ತು ಶುಲ್ಕಗಳನ್ನು ಕಡಿಮೆ ಮಾಡಿ ಸಾಮಾನ್ಯ ಜನರಿಗೆ ನೆರವಾಗುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಬೆಲೆ ಇಳಿಕೆ, ರೂಪಾಯಿ ಮೌಲ್ಯ ವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಕಪ್ಪು ಹಣ ವಾಪಸ್ ತರುವ ಭರವಸೆ ನೀಡಿದ್ದ ಸರ್ಕಾರ ಇಂದು ಜನರ ಮೇಲೆಯೇ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ಟೀಕಿಸಿದರು.
ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕೆ. ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ತುಂಗಭದ್ರ ಕಾಡಾ ಅಧ್ಯಕ್ಷ ಹಸನ್ ಸಾಬ್ ಡೂಟಿಹಾಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಜಿಲ್ಲಾ ವಕ್ತಾರ ಕೃಷ್ಣ ಇಟ್ಟಂಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಗಾಳೆಪ್ಪ ಪೂಜಾರ್, ಶ್ರೀನಿವಾಸ ಗುಪ್ತ, ಮಂಜುನಾಥ ಗೊಂಡವಾಳ, ಗಂಗಮ್ಮ ಸೌಮ್ಯ ಕಂದಗಲ್, ಮಲ್ಲಿಕಾರ್ಜುನ, ಸುರೇಶ್ ದಾಸರೆಡ್ಡಿ, ಲಿಂಗೇಶ್ ಕಲ್ಗುಡಿ, ಗವಿಸಿದ್ದಪ್ಪ ಕರಡಿ, ಗವಿಸಿದ್ದನಗೌಡ ಪಾಟೀಲ, ಶೈಲಜಾ ಹಿರೇಮಠ್, ಜ್ಯೋತಿ ಗೊಂಡವಾಳ, ರೇಷ್ಮಾ ಖಾಜಾವಲಿ, ಸಾವಿತ್ರಿ ಮುಜುಂದಾರ್, ಚಾಂದ್ ಪಾಷಾ ಕಿಲ್ಲೇದಾರ್, ಹುಸೇನ್ ಪೀರ ಮುಜಾವರ್, ಮಾನ್ವಿ ಪಾಷಾ, ಅಜ್ಜಪ್ಪಗೌಡ, ಯುವ ಕಾಂಗ್ರೆಸ್ ನಾಯಕ ಆಸಿಫ್ ಹನಗಿ, ಅಕ್ಬರ್ ಪೊಲೀಸ್ ಮನಿ, ರೇಣುಕಾ, ಪರಶುರಾಮ ಕೆರೆಹಳ್ಳಿ, ಮಲ್ಲು ಪೂಜಾರ್, ಹಾಜಿ ಹುಸೇನಿ, ಅಕ್ಬರ್ ಪಾಷಾ ಪಲ್ಟನ್, ಅಜೀಮುದ್ದೀನ್ ಅತ್ತಾರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

More Stories
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರವರ ಧರ್ಮಪತ್ನಿ ಚೆನ್ನಮ್ಮನವರು ತಮ್ಮ 89ನೇ ವಯಸ್ಸಿನಲ್ಲಿ, ಜುಲೈ 18, 2026ರಂದು ಹೃದಯಾಘಾತದಿಂದ ನಿಧನರಾದರು.
ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಗಲಾದ ಕರವೇ ಸ್ವಾಭಿಮಾನಿ ಬಣ ಉಚಿತ ಪುಸ್ತಕ ವಿತರಿಸಿ ದಾನಿಗಳಿಗೆ ಸನ್ಮಾನ