ವಿದ್ಯಾರ್ಥಿಗಳ ಜೀವನ ಜಾಲಿ ಮರವಾಗಬಾರದು. ಹೂವಿನ ಗಿಡದಂತಾಗಬೇಕು. ಶ್ರೀ ಶ್ರೀ ಭೀಮೇಶಪ್ಪ ಅಜ್ಜ ಅಗ್ನಿಕೊಂಡ.
ಕಾರಟಗಿ : ವಿಧ್ಯಾರ್ಥಿಗಳು ಜಾಲಿ ಮರ ಆಗಬಾರದು ಹೂವಿನ ಗಿಡದಂತಾಗಬೇಕು , ನಿಮಗೆ ನೀಡುವ ಪ್ರತಿಭಾ ಪುರಸ್ಕಾರ ನಿಮ್ಮ ಭವಿಷ್ಯದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಅಗ್ನಿಕೊಂಡ ದ್ಯಾಮಮ್ಮ ದೇವಿಯ ಆರಾಧಕರಾದ ಅಪ್ಪಾಜಿಯವರು ಹೇಳಿದರು. ಪಟ್ಟಣದ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಸಂಘದ ವತಿಯಿಂದ ‘ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಆಶೀರ್ವಚನ ಮಾಡಿದರು.ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗುರುತಿಸಿ ಹಾಲುಮತ ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರವನ್ನು ಆಯೋಜಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 40 ಕ್ಕೂ ಅಧಿಕ ವಿದ್ಯಾರ್ಥಿ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸಿದ್ದರಾಮಯ್ಯ ಗುರುವಿನ ಮಹಾ ಸ್ವಾಮಿಗಳು ಬಸಪಟ್ಟಣ ಅವರು ಮಾತನಾಡಿ ವಿದ್ಯಾರ್ಥಿಗಳು ಕನಸು ಕಾಣಬೇಕು ಅದು ರಾತ್ರಿ ಕಾಣುವ ಕನಸಾಗಿರಬಾರದು. ಬದಲಾಗಿ ಜೀವನದ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಗುರಿ ತಲುಪುವ ಕನಸು ಕಾಣಬೇಕು ಆ ಕನಸು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳ ನಡೆಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ತಂದೆ ತಾಯಿಯ ಮಾತು ಕೇಳಬೇಕು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಹಿತ ವಚನ ಬೋಧಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮಾದಯ್ಯ ಗುರುವಿನ ಮಹಾಸ್ವಾಮಿಗಳು ತುರವಿಹಾಳ. ಶ್ರೀ ಭೀಮಪ್ಪ ಅಜ್ಜ ಅಗ್ನಿಕೊಂಡ ದ್ಯಾವಮ್ಮ ದೇವಿ ಆರಾಧಕರು ಶ್ರೀ ಸಿದ್ದರಾಮಯ್ಯ ಗುರುವಿನ ಮಹಾ ಸ್ವಾಮಿಗಳು ಬಸಪಟ್ಟಣ ಶ್ರೀ ದಿನ ಗೆಡ್ಡೆಪ್ಪ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕಾರಟಗಿ ತಾಲೂಕ ಹಾಲುಮತ ಸಮಾಜದ ತಾಲೂಕ ಅಧ್ಯಕ್ಷರಾದ ಶ್ರೀ ಉಮೇಶ್ ಬಂಗಿ ಕುರುಬ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ವಿಠ್ಠಲ್ ಜೀರಗಾಳಿ ವೀರೇಶ್ ಸಾಲೋಣಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು. ಮಲ್ಲಿಕಾರ್ಜುನ ಕುರುಬ ಮಹಾಸಭಾ ರಾಜ್ಯಾಧ್ಯಕ್ಷರು.ಭೀಮಣ್ಣ ಕರಡಿ ಪ್ರಧಾನ ಕಾರ್ಯದರ್ಶಿಗಳು ಮಂಜುನಾಥ್ ಮೇಗೂರು ಪುರಸಭೆ ಅಧ್ಯಕ್ಷರು. ಸಾಬಣ್ಣ ಕಟ್ಟಿಕಾರ್ ಪುರಸಭೆ ಮುಖ್ಯ ಅಧಿಕಾರಿಗಳು. ಡಾಕ್ಟರ್ ವೀರಭದ್ರಗೌಡ ಮಕ್ಕಳ ತಜ್ಞರು. ಮರಿಯಪ್ಪ ಸಾಲೊನಿ. ರಮೇಶ್ ಕುಂಟೋಜಿ ಉಮೇಶ್ ಗುರಿಕಾರ್ ಉಪನ್ಯಾಸಕರು. ನಾಗರಾಜ ಹುಡೇದ ಉಪನ್ಯಾಸಕರು ಅಯ್ಯಪ್ಪ ಯರಡೋಣ.ನರಸಿಂಗ್ ಸಿದ್ದಾಪುರ ಕೆಇಬಿ. ದ್ಯಾಮಣ್ಣ ಬೆನಕಟ್ಟಿ ಶಿಕ್ಷಕರು. ರಾಮಚಂದ್ರ ವಕೀಲರು ಗಂಗೂಬಾಯಿ ಟೀಚರ್ ವೀರೇಶ್ ವಿದ್ಯಾ ಭಾರತಿ ಪ್ರಿನ್ಸಿಪಾಲರು ರಮೇಶ್ ಸಾಲೋಣಿ ಪಂಪಾಪತಿ ಈಳಿಗನೂರು ಸೇರಿದಂತೆ ಹಲವು ಹಾಲುಮತ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು

More Stories
ಜುಲೈ 12ರಂದು ವಿಶ್ವಕರ್ಮರ ಜನ ಜಾಗೃತಿ ಜಿಲ್ಲಾ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ
ರಸ್ತೆ ಸುರಕ್ಷತೆಗೆ ಹೆಲ್ಮೆಟ್ ಕಡ್ಡಾಯ : ಡಿವೈಎಸ್ಪಿ ನ್ಯಾಮಗೌಡರ್ ಮನವಿ,,